top of page
  • Writer's pictureUnder the Raintree Festival

'Naanu Nanna Yajamaani' by Swarna Jyothi

ನನ್ನ ಯಜಮಾನಿ ನಾನು

ತೆರೆದ ಅಂಚಿನ ಕಥೆ ನಾನು

ಹೇಗೆ ಓದಿದರೂ ಅರ್ಥವಾಗುವೆನು

ಆದರೇ ಒಂದೇ ಒಂದು ಷರತ್ತು

ಓದುವ ಅರಿವಿದ್ದರೆ ನಿಮಗೆ ಒಳಿತು

ಸ್ಪರ್ಶ ಸ್ಪಂದನದ ಪರಿದಿ ಮೀರಿ

ಪ್ರಸ್ಫುಟಿತ ಪರಿಮಳ ನಾನು

ನನ್ನ ಯಜಮಾನಿ ನಾನು

ಮುಖವನ್ನು ನೋಡಿದರೆ

ಮೋಹಿತರಾಗುವಿರಿ

ಶಬ್ದಗಳನ್ನು ಹುಡುಕಿದರೆ

ಸ್ತಬ್ಧರಾಗುವಿರಿ

ಭಾವನೆಗಳನ್ನು ಅರಿತರೆ

ಭ್ರಾಂತರಾಗುವಿರಿ

ಕಣ್ಣಂಚಿನಿಂದ ನಿರೀಕ್ಷಿಸಿ

ಮನ –ಮಸ್ತಿಷ್ಕವನ್ನು ಭೇದಿಸುವ

ತೀಕ್ಷ್ಣ ತೀವ್ರ ಕಂಟಕ ನಾನು

ಕಾಣದ ಕೇಳದ ಮಾತು ನಾನು

ನನ್ನ ಯಜಮಾನಿ ನಾನು

ಶಬ್ದ- ಶಬ್ದಗಳಲ್ಲಿ

ನಿಗೂಢ ಅರ್ಥಗಳು ಅಡಗಿವೆ

ಪುಟ- ಪುಟಗಳಲ್ಲಿ

ಬದುಕಿನ ಬರಹಗಳಿವೆ

ಅರ್ಥವಾದರೆ ಹತ್ತಿರ ನಾನು

ತಿಳಿಯದಿದ್ದರೆ ವ್ಯರ್ಥ ಬಾಳು

ಬಾಳಿನ ಆಸೆ ನಾನು

ನಿಸರ್ಗದ ಶ್ವಾಸ ನಾನು

ನನ್ನ ಯಜಮಾನಿ ನಾನು

ಆದರೂ

ತೆರೆದ ಅಂಚಿನ ಕಥೆ ನಾನು

151 views3 comments

Recent Posts

See All
bottom of page