top of page
Writer's pictureUnder the Raintree Festival

'MANAVA BICHHI' by Gowri Bhat

ಸ್ಪಂದಿಸುತಿದೆ ಮನವು

ಮುಖವಾಗಿದೆ ಮೌನವು

ಗರಿಬಿಚ್ಚಿದೆ ಅಂತರಾಳವು

ಹುರಿದುಂಬಿಸಿದೆ ಆ ಕ್ಷಣವು

ದುಂದುಬಿನಾದದಂತೆ ನಲಿದವು

ಓ ಹೆಣ್ಣೇ ನಿನ್ನಅಂತರಂಗದಾಳದಲಿ

ಮೂಡಣರವಿಯ ಕಿರಣವು

ಮಂದಸ್ಮಿತೆಯಂತೆ ಕಂಗೊಳಿಸಿದವು

ಮೂಕವಿಸ್ಮಿತದಂತೆ ಹೊಳೆದವು

ಭಾವಪರವಶದಿಂದ ಆ ಮೊಗವು

ಸಹೃದಯತೆಯಿಂದ ಅರಳಿದವು

ಓ ಹೆಣ್ಣೇ ನಿನ್ನಅಂತರಂಗದಾಳದಲಿ

ಕಾಂತಿಯಿಂದ ತುಂಬಿದವು

ಅಡಗಿಕೊಂಡಂತೆ ಬಾಸವಾದವು

ಹೃದಯದಿಂದ ಮೂಡಿದವು

ಪವಿತ್ರದಂತಹ ಪ್ರೀತಿಯು

ಸೊಗಸಾಗಿ ಮೂಡಿದವು

ಓ ಹೆಣ್ಣೇ ನಿನ್ನಅಂತರಂಗದಾಳದಲಿ

534 views0 comments

Recent Posts

See All

Comments


bottom of page